ಕಿರಣ್ ಬೇಡಿ, ಎಐಎಡಿಎಂಕೆ ಶಾಸಕ 
ದೇಶ

ವಿಡಿಯೋ: ಗಾಂಧಿ ಜಯಂತಿ ವೇದಿಕೆಯಲ್ಲೇ ಕಿತ್ತಾಡಿದ ಕಿರಣ್ ಬೇಡಿ-ಎಐಎಡಿಎಂಕೆ ಶಾಸಕ

ಶಾಸಕರ ಭಾಷಣದ ಅವಧಿಗೆ ಸಂಬಂಧಿಸಿದಂತೆ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಎಐಎಡಿಎಂಕೆ ಶಾಸಕ ಎ...

ಪುದುಚೆರಿ: ಶಾಸಕರ ಭಾಷಣದ ಅವಧಿಗೆ ಸಂಬಂಧಿಸಿದಂತೆ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಹಾಗೂ ಎಐಎಡಿಎಂಕೆ ಶಾಸಕ ಎ. ಅಣ್ಬಳಗನ್ ಅವರು ಗಾಂಧಿ ಜಯಂತಿ ವೇದಿಕೆಯಲ್ಲೇ ಕಿತ್ತಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.
ಇಂದು ಪುದುಚೆರಿಯ ಉಪ್ಪಾಳಂನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಸಚಿವರು ಸಹ ಭಾಷಣ ಮೊಟಕುಗೊಳಿಸುವಂತೆ ಶಾಸಕನಿಗೆ ಸೂಚಿಸಿದರೂ ಭಾಷಣ ಮುಂದುವರೆಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಿರಣ್ ಬೇಡಿ ಅವರು ಮೈಕ್ ಆಫ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದ ಕೋಪಗೊಂಡ ಶಾಸಕ ಅಣ್ಬಳಗನ್ ಅವರು, ಕಿರಣ್ ಬೇಡಿ ಅವರ ವಿರುದ್ಧ ಏರುಧ್ವನಿಯಲ್ಲಿ ಮಾತನಾಡತೊಡಗಿದರು.
ವಿಡಿಯೋದಲ್ಲಿ ಕಿರಣ್ ಬೇಡಿ ಅವರು ಭಾಷಣ ಮುಗಿಸಿ ಹೋಗಿ ಕುಳಿತುಕೊಳ್ಳುವಂತೆ ಶಾಸಕನಿಗೆ ಕೈಮುಗಿದು ಕೇಳಿಕೊಳ್ಳುತ್ತಿದ್ದಾರೆ. ಆದರೆ ಅವರೊಂದಿಗೆ ಜಗಳ ತೆಗೆದ ಶಾಸಕ ನೀವೇ ವೇದಿಕೆಯಿಂದ ಹೋಗಿ ಎಂದು ದಬಾಯಿಸುತ್ತಿದ್ದಾರೆ.
ಕಿರಣ್ ಬೇಡಿ ಅವರ ವಿರುದ್ಧ ಅಣ್ಬಳಗನ್ ಟೀಕೆ ನಡೆಸುತ್ತಿರುವುದು ಇದು ಮೊದಲೇನಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಪುದುಚೆರಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು, ಬೇಡಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SIR ಗೆ ಆಕ್ಷೇಪ; ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಥಾಣೆ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿ - ವ್ಯಾನ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ 11 ಮಂದಿ ಸಾವು

SCROLL FOR NEXT